ಫೆರಾರಿ, ಪಾವ್‍ಲೊ
	1822-1889. ಇಟಲಿಯ ನಾಟಕ ಚರಿತ್ರೆಯಲ್ಲಿ ಹೆಸರಾಂತ ಪ್ರಹಸನಕಾರ. ತನ್ನ ಸ್ವಂತ ಸ್ಥಳವಾದ ಮೊಡೆನಾದಲ್ಲಿ, ಆಮೇಲೆ ಮಿಲಾನ್ ನಗರದಲ್ಲಿ ಲೋಕ ವಿಖ್ಯಾತ ಗೋಲ್ಡೋನಿಯನ್ನು ಕರಿಸಿ ಹಲವಾರು ಕಾಮಿಡಿಗಳನ್ನು ಬರೆದ. ಗೊಲ್ಡೋನಿಯನ್ನೇ ನಾಯಕನನ್ನಾಗಿ ಮಾಡಿ ಸೂಸೆಡಿಕಿ ಕಾಮಿಡಿ ನೂವ್ ಎಂಬ ಅತ್ಯಂತ ಸ್ವಾರಸ್ಯವಾದ ಪ್ರಹಸನವನ್ನು ಬರೆದ. ಜಟಿಲವಾದ, ಅಸಂಬದ್ಧವಾದ ಕಥಾ ಸಂವಿಧಾನ, ಚಿತ್ತಾಕರ್ಷಕವಾದ ಪಾತ್ರ ವಿನ್ಯಾಸ, ಮಾತಿನ ಚಮತ್ಕಾರ-ಇವು ಇವನ ನಾಟಕಗಳ ಮುಖ್ಯ ಗುಣಗಳು. ಫ್ರೆಂಚ್ ಸಾಹಿತಿ ಡ್ಯೂಮಾ ಬರೆದ ವಾಸ್ತವಿಕ ಸಾಮಾಜಿಕ ನಾಟಕಗಳ ಪ್ರಭಾವವನ್ನು ಇವನ ಪ್ರಹಸನಗಳಲ್ಲಿ ಕಾಣಬಹುದು.
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ